JEE ಮೇನ್ ಎಕ್ಸಾಮ್ 2021 ಮತ್ತೆ ಮುಂದೂಡಿಕೆ: ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್
ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮೇನ್ ಎಕ್ಸಾಮ್ 2021 ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪೊಖ್ರಿಯಾಲ್, 'ಹೆಚ್ಚಿನ ಮಾಹಿತಿಗಾಗಿ NTA(The National Testing Agency) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Swiggy ಡೆಲಿವೆರಿ ಬಾಯ್ ಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ, ಕೋವಿಡ್ ಚಿಕಿತ್ಸೆಯ ಖರ್ಚು ಕೂಡಾ ಭರಿಸಲಿದೆ ಕಂಪನಿ
ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಈ ಹಿಂದೆ ಜೆಇಇ ಮೇನ್ ಎಕ್ಸಾಮ್ 2021(JEE Main May 2021 Exam) ಮುಂದೂಡಲಾಗಿತ್ತು. ಪರಿಷ್ಕೃತ ದಿನಾಂಕಗಳು ಪರೀಕ್ಷೆಗೆ ಕನಿಷ್ಠ 15 ದಿನಗಳ ಮೊದಲು ಇರುತ್ತವೆ ಎಂದು ನೋಷನ್ ಟೆಸ್ಟಿಂಗ್ ಏಜೆನ್ಸಿ ಹೇಳಿದೆ.
Online Banking Tips: ನೀವು ಆನ್‌ಲೈನ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ
ಮೊದಲ ಎರಡು ಸೆಷನ್ʼಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್ʼನಲ್ಲಿ ಪೂರ್ಣಗೊಂಡಿವೆ. ಪರೀಕ್ಷೆ(Exams)ಗಳಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಾಗಿ ಅಧಿಕೃತ NTA ವೆಬ್ ಸೈಟ್ (www.nta.ac.in) ಮತ್ತು (https://jeemain.nta.nic.in/) ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿ! 'Pay Fixation' ಗಡುವನ್ನು 3 ತಿಂಗಳವರೆಗೆ ವಿಸ್ತರಣೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.